ದೇಹದಲ್ಲಿ ಮಚ್ಚೆಗಳು ಹೆಚ್ಚಾದರೆ ಅಪಾಯಕಾರಿಯೇ?

ದೇಹದಲ್ಲಿ ಮಚ್ಚೆಗಳು ಹುಟ್ಟುವಾಗಲೇ ಇರಬಹುದು, ಇನ್ನು ಕೆಲವು ಮಚ್ಚೆಗಳು ಬೆಳೆಯುತ್ತಿದ್ದಂತೆ ಕಂಡು ಬರುತ್ತದೆ. ಒಬ್ಬ ಆರೋಗ್ಯವಂತ ಮನುಷ್ಯನಲ್ಲಿ 10-40 ಮಚ್ಚೆಗಳು ಇರುತ್ತದೆ. ಯಾವುದೇ ವಯಸ್ಸಿನಲ್ಲಿಯೂ ಸಹ ಬರಬಹುದು. ಸಾಮನ್ಯವಾಗಿ ಮನುಷ್ಯನಿಗೆ 50 ವರ್ಷದವರೆಗೂ ಮಚ್ಚೆಗಳು ಬರಬಹುದು.

ದೇಹದ ಯಾವುದೇ ಭಾಗದಲ್ಲೂ ಮಚ್ಚೆ ಕಾಣಿಸಬಹುದು ಮಚ್ಚೆ ದೇಹದ ಇದೇ ಭಾಗದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದೇಹದ ಯಾವುದೇ ಭಾಗದಲ್ಲೂ ಕಾಣಿಸಬಹುದು.

ಮಚ್ಚೆ ಏಕೆ ಉಂಟಾಗುತ್ತದೆ?:
ಮಚ್ಚೆಗಳು ಅನೇಕ ಕಾರಣಗಳಿಂದ ಉಂಟಾಗುವುದು. ವಂಶವಾಹಿಯಾಗಿ ಬರಬಹುದು ಅಥವಾ ತುಂಬಾ ಬಿಸಿಲು ಮೈ ಮೇಲೆ ಬಿದ್ದಾಗ ಬರಬಹುದು, ಬಹು ಮುಖ್ಯವಾಗಿ ಮೆಲನಿನ್ಎಂಬ ಪಿಗ್ಮೆಂಟ್ಮಚ್ಚೆ ಬರಲು ಪ್ರಮುಖ ಕಾರಣವಾಗಿದೆ.

ಮಚ್ಚೆಗಳು ಅನಾರೋಗ್ಯದ ಲಕ್ಷಣಗಳೇ?:|ಸಾಮಾನ್ಯವಾಗಿ ಮಚ್ಚೆಗಳು ಕಂಡು ಬಂದರೆ ಅದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ತುಂಬಾ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಮಚ್ಚೆಗಳು ಬರುತ್ತದೆ, ಆದರೆ ಮಚ್ಚೆಗಳ ಗಾತ್ರ ಹೆಚ್ಚುತ್ತಿದೆಯೇ ಅಥವಾ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತಿದೆಯೇ ಎಂಬುವುದನ್ನು ಗಮನಿಸಬೇಕು.

ಯಾವ ಬಗೆಯ ಮಚ್ಚೆಗಳನ್ನು ಗಮನಿಸಬೇಕು:
ಮಚ್ಚೆಯಲ್ಲಿ ವ್ಯತ್ಯಾಸ ಉಂಟಾಗದಿದ್ದರೆ ಏನೂ ತೊಂದರೆಯಿಲ್ಲ, ಆದರೆ ಮಚ್ಚೆಯಲ್ಲಿ ಗಮನಾರ್ಹವಾದ ಬದಲಾವಣೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇದ್ದಕ್ಕಿದ್ದಂತೆ ತುಂಬಾ ಮಚ್ಚೆಗಳು ಕಂಡು ಬರುವುದು , ಮಚ್ಚೆಯ ಬಣ್ಣದಲ್ಲಿ ವ್ಯತ್ಯಾಸ ಕಂಡು ಬಂದರೆ ನೀವು ಆದಷ್ಟು ಒಳ್ಳೆಯ ಚರ್ಮರೋಗ ವೈದ್ಯರನ್ನು ಕಾಣುವುದು ಒಳ್ಳೆಯದು.

ತುಂಬಾ ಮಚ್ಚೆಗಳು ಕಂಡು ಬಂದರೆ 40-50 ಮಚ್ಚೆಗಳು ಇದ್ದರೆ ತೊಂದರೆಯಿಲ್ಲ, ಆದರೆ ಅದಕ್ಕಿಂತ ಹೆಚ್ಚಿನ ಮಚ್ಚೆಗಳು ಇದ್ದಕ್ಕಿದ್ದಂತೆ ಕಾಣಿಸಿದರೆ ಚರ್ಮರೋಗ ವೈದ್ಯರನ್ನು ಕಂಡು ಅವರ ಸಲಹೆ ಪಡೆಯಿರಿ. ತ್ವಚೆ ಕ್ಯಾನ್ಸರ್ ಲಕ್ಷಣಗಳು ಕೆಲವೊಂದು ಮಚ್ಚೆಗಳು ಇತರ ಮಚ್ಚೆಗಳಂತೆ ಅನಿಸದಿದ್ದರೆ ಅದರ ಬಣ್ಣದಲ್ಲಿ ವ್ಯತ್ಯಾಸವಿದ್ದರೆ ತ್ವಚೆ ಕ್ಯಾನ್ಸರ್ಲಕ್ಷಣವಾಗಿರುತ್ತೆ. * ಉರಿ ಬಿಸಿಲಿನಲ್ಲಿ ತುಂಬಾ ಕೆಲಸ ಮಾಡುವವರಿಗೆ ಹಾನಿಕಾರಕ ರಾಸಾಯನಿಕಗಳು ತ್ವಚೆಗೆ ತಾಗುವುದರಿಂದ ತ್ವಚೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.